Manasa Nayana is a front runner among the current generation of classical musicians hailing from Karnataka. Whether it is trying out new lyrical material at concerts or exploring new spaces to perform, Manasa Nayana is always up for a challenge. These have resulted in him trying out exclusive concerts based on the poems of Kannada poets, as well as performing in spaces such as old age homes, high schools, palliative care centres, and even the central jail of Mysore.
Manasa Nayana was trained initially by Vid. S K Vasumathi, one of the pioneers of the Sugama Sangeetha movement. Her innovative training methods enabled Manasa Nayana to graduate very quickly from learning compositions to improvising. Manasa Nayana continued his training with Vid. Vairamangalam Lakshminarayana at Chennai. It was the training with two of the celebrated masters – Padmabhushana Dr. R K Srikantan and Sangeetha Kalanidhi Dr. R Vedavalli, that firmly established Manasa’s outlook in music. Rich repertoire of compositions, adherence to tradition, and clear diction – these are some of the qualities that Manasa Nayana has imbibed from these masters and incorporated into his own art.
ವಿದ್ವಾನ್ ಮಾನಸ ನಯನ ಕರ್ನಾಟಕದ ಪ್ರಸಕ್ತ ತಲೆಮಾರಿನ ಮುಂಚೂಣಿಯ ಶಾಸ್ತ್ರೀಯ ಗಾಯಕರಲ್ಲಿ ಒಬ್ಬರು. ಮಾನಸ ನಯನ ತಮ್ಮ ಸಂಗೀತ ಶಿಕ್ಷಣವನ್ನು ಸುಗಮ ಸಂಗೀತದ ಪ್ರವರ್ತಕರಲ್ಲಿ ಒಬ್ಬರಾದ ವಿದುಷಿ ಎಸ್. ಕೆ. ವಸುಮತಿಯವರಲ್ಲಿ ಪ್ರಾರಂಭಿಸಿ ಮದರಾಸಿನ ವೈರಮಂಗಳಂ ಲಕ್ಷ್ಮೀನಾರಾಯಣ ಅವರಲ್ಲಿ ಮುಂದುವರೆಸಿದರು. ಪದ್ಮಭೂಷಣ ಡಾ. ಆರ್. ಕೆ ಶ್ರೀಕಂಠನ್ ಹಾಗೂ ಸಂಗೀತ ಕಲಾನಿಧಿ ಡಾ. ಆರ್. ವೇದವಲ್ಲಿ ಅವರ ಬಳಿಯ ಗುರುಕುಲ ಪದ್ಧತಿಯ ಶಿಕ್ಷಣ ಮಾನಸ ನಯನ ಅವರ ಗಾಯನ ಶೈಲಿಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿತು.
ಕಲಿಕೆಯ ದಿನಗಳಲ್ಲಿ ಜೂನಿಯರ್, ಸೀನಿಯರ್ ಮತ್ತು ವಿದ್ವತ್ ಪರೀಕ್ಷೆಗಳಲ್ಲಿ ಪ್ರಥಮ ರಾಂಕ್ ವಿಜೇತರಾದ ಮಾನಸ ನಯನ ಆಕಾಶವಾಣಿಯ ರಾಷ್ಟ್ರೀಯ ಸಂಗೀತ ಸ್ಪರ್ಧೆಯನ್ನೂ ಒಳಗೊಂಡಂತೆ ಅನೇಕ ಸಂಗೀತ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಗಳಿಸಿದ್ದರು. CCRT (Centre for Cultural Resources and Training), ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮತ್ತು ಭಾರತ ಸರ್ಕಾರದ ಸಂಸ್ಕೃತಿ ಇಲಾಖೆಯ ಶಿಷ್ಯವೇತನ ಪುರಸ್ಕೃತರಾಗಿದ್ದರು.